ರೋಡ್ಸ್ ಹುಲ್ಲು ಪೋಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಹುಲ್ಲು. ಕ್ಲೋರಿಸ್ ಗಯಾನ ಇದರ ವೈಜ್ಞಾನಿಕ ಹೆಸರು. ದಕ್ಷಿಣ ಆಫ್ರಿಕ ಇದರ ತವರು. ಭಾರತದಲ್ಲಿ ಇದನ್ನು ವ್ಯಾಪಕವಾಗಿ ಬೆಳೆಸಲಾಗುತ್ತಿದ್ದು ದನಗಳಿಗೆ ಒಳ್ಳೆಯ ಮೇವಾಗಿ ಪ್ರಸಿದ್ಧವಾಗಿದೆ. == ಸಸ್ಯವರ್ಣನೆ == ಇದು 1-1.5 ಮೀ. ಎತ್ತರಕ್ಕೆ ಬೆಳೆಯುವ ಏಕವಾರ್ಷಿಕ ಇಲ್ಲವೆ ಬಹುವಾರ್ಷಿಕ ಸಸ್ಯ. ಉಷ್ಣತೆ ಮತ್ತು ಆರ್ದ್ರತೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಹುಲುಸಾಗಿ ಬೆಳೆಯುತ್ತದೆ. == ಕೃಷಿ == ಇದನ್ನು ಬೇರು ತುಂಡುಗಳಿಂದ ವೃದ್ಧಿಸಲಾಗುತ್ತದೆ. ಇದನ್ನು ವರ್ಷದ ಯಾವ ಕಾಲದಲ್ಲಾದರೂ ಬೆಳೆಸಬಹುದಾದರೂ ಚಳಿಗಾಲ ಇದರ ಬೆಳೆವಣಿಗೆಗೆ ಹೆಚ್ಚು ಅನುಕೂಲ. ಮಳೆಗಾಲದಲ್ಲಿ ಸಮೃದ್ಧವಾಗಿ ಬೆಳೆಯುತ್ತದೆ. ವರ್ಷಕ್ಕೆ 7-8 ಬಾರಿ ಇದನ್ನು ಕಟಾಯಿಸಬಹುದು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು ==